Comments

ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ


ರಾಯಚೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನಿಸ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಓಡಿ ತನಿಖೆಗೆ ವಹಿಸಿತ್ತು. ಸಿಓಡಿ ಅಧಿಕಾರಿಗಳು ನಿಸ್ಪಕ್ಷಪಾತ ತನಿಖೆ ನಡೆಸಿಲ್ಲ. ಸಚಿವ ಕೆ.ಜೆ.ಜಾರ್ಜ್ ಹಾಗೂ ಐಎಎಸ್ ಅಧಿಕಾರಿಗಳು ನಿರಾಪರಾಧಿಗಳೆಂದು ವರದಿ ನೀಡಿತ್ತು. ಬೇಸತ್ತ ಡಿವೈಎಸ್‍ಪಿ ಗಣಪತಿ ಕುಟುಂಬ ಸಿಬಿಐ ತನಿಖೆ ಕೈಗೊಳ್ಳಲು ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು. ಸುಪ್ರೀಂಕೋರ್ಟ್ ಕೂಡ ಸಿಓಡಿ ತನಿಖೆ ಸರಿಯಾಗಿ ನಡೆದಿಲ್ಲ ಎಂದು ತೀರ್ಮಾನಿಸಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಮತ್ತು ತನಿಖೆಗೆ ತೊಂದರೆಯಾಗುವ ಹಿನ್ನಲೆಯಲ್ಲಿ ಸಚಿವರಾಗೆ ಕೆ.ಜೆ.ಜಾರ್ಜ್ ಸಚಿವ ಸ್ಥಾನದಲ್ಲಿ ಮುಂದುವರೆಸಬಾರದು. ಕೂಡಲೇ ರಾಜ್ಯ ಸರ್ಕಾರ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿಮುಖಂಡರಾದ ಜೆ.ಶರಣಪ್ಪಗೌಡ, ತ್ರಿವಿಕ್ರಮ ಜೋಷಿ, ಡಾ.ಬಸವನಗೌಡ ಪಿ.ಪಾಟೀಲ್, ಮಹಾದೇವಪ್ಪಗೌಡ, ಶಶಿರಾಜ ಮಸ್ಕಿ, ಶ್ರೀನಿವಾಸರೆಡ್ಡಿ, ಪ್ರಾಣೇಶ ದೇಶಪಾಂಡೆ, ಯು.ದೊಡ್ಡಮಲ್ಲೇಶಪ್ಪ, ಬಂಡೇಶ ವಲ್ಕಂದಿನ್ನಿ, ಗಿರೀಶ್ ಕನಕವೀಡು, ರಾಮಚಂದ್ರ ಕಡಗೋಳು, ರಮಾನಂದ ಯಾದವ್, ಡಾ.ಶರಣಪ್ಪ, ಎ.ವಿಜಯರಾಜ್, ಬಂಗಿ ನರಸರೆಡ್ಡಿ, ಕಡಗೋಳು ಆಂಜನೇಯ್ಯ, ಎ.ಚಂದ್ರಶೇಖರ್, ರಾಜಕುಮಾರ, ಆರ್.ಕೆ.ಅಮರೇಶ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
Share on Google Plus

About S

    Blogger Comment
    Facebook Comment

0 comments:

Post a Comment